ಕನ್ನಡ ಕಲಿ 0

ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಲಿ

108 people have signed this petition. Add your name now!
ಕನ್ನಡ ಕಲಿ 0 Comments
108 people have signed. Add your voice!
11%
Maxine K. signed just now
Adam B. signed just now

ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಲಿ

ಕನ್ನಡ ಕಲಿಯ ಸವಿನಯ ಮನವಿ

ನಮ್ಮ ಕರ್ನಾಟಕ ಲಾಂಛನ ಅರ್ಥಪೂರ್ಣವೂ ಸುಂದರವೂ ಆದ ಒಂದು ಕಲಾಕೃತಿ. ಇದರಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಹಿಂದಿನ ಮೈಸೂರು ರಾಜ್ಯಗಳ ಲಾಂಛನಗಳ ಅಂಶಗಳು ಒಂದಾಗಿವೆ. ಧರ್ಮ ಚಕ್ರ ಮತ್ತು ನಾಲ್ಕು ಸಿಂಹಗಳ ಭಾರತ ದೇಶದ ಲಾಂಛನವೂ ಸೇರಿದೆ. ಹೀಗೆ ಕರ್ನಾಟಕದ ರಾಜವೈಭವ, ಪರಂಪರೆ, ಭಾರತೀಯತೆ, ಮತ್ತು ವಿಶ್ವ ಸತ್ಯವನ್ನು ಬೀರುವ ಈ ಲಾಂಛನ ನಮ್ಮೆಲ್ಲರ ಹೆಮ್ಮೆಯ ಸಂಕೇತ.

ಕರ್ನಾಟಕದ ಲಾಂಛನದಲ್ಲಿ ಒಮ್ಮೆಲೆ ಎದ್ದು ಕಾಣುವ ಗಮನೀಯ ಕೊರತೆ ಎಂದರೆ, ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವುಳ್ಳ, ಶಾಸ್ತ್ರೀಯ ಭಾಷೆಯಾದ ಕನ್ನಡದ ಭಾಷೆ ಮತ್ತು ಲಿಪಿ ಎರಡೂ ಇಲ್ಲದಿರುವುದು. ಪರಿಶೀಲಿಸಿದರೆ, ಭಾರತದ ಪ್ರತಿಯೊಂದು ಇತರ ರಾಜ್ಯವೂ, ತನ್ನದೇ ವಿಶಿಷ್ಟ ಲಿಪಿ ಇದ್ದಾಗ - ಓಡಿಸಿ, ಬಂಗಾಳಿ, ಗುಜರಾತಿ, ಪಂಜಾಬಿ, ತಮಿಳು, ತೆಲುಗು, ಮಲಯಾಳ ಇತ್ಯಾದಿ - ಅದನ್ನೇ ತನ್ನ ಲಾಂಛನದಲ್ಲಿ ಉಪಯೋಗಿಸಿದೆ. ಕೆಲವು ರಾಜ್ಯಗಳು ತಮ್ಮ ಲಿಪಿಯನ್ನು ಮಾತ್ರ ಬಳಸಿಕೊಂಡಿವೆ.

ಈ ಕೊರತೆಯನ್ನು ನೀಗಿಸಲು, ಸದ್ಯದ ಲಾಂಛನವನ್ನು ಸೂಕ್ತವಾಗಿ ಬದಲಿಸಬೇಕು. ಲಾಂಛನದಲ್ಲಿ ಭಾಷೆ, ಲಿಪಿ, ಮೂಲ, ವಾಚ್ಯಾರ್ಥ, ಸೂಚ್ಯಾರ್ಥ ಎಲ್ಲವೂ ಕನ್ನಡ ಆಗಿರಬೇಕು, ಕನ್ನಡ ನಾಡು ನುಡಿ ಸಂಸ್ಕೃತಿಗಳಿಗೆ ಸಂಬಂಧಿಸಿರಬೇಕು. ಕರ್ನಾಟಕ ಲಾಂಛನ ಕನ್ನಡ ಲಾಂಛನ ಆಗಬೇಕು ಎನ್ನುವುದೇ ಕನ್ನಡ ಕಲಿಯ ಒತ್ತಾಸೆ.

ಕನಿಷ್ಠ ಮಟ್ಟದಲ್ಲಿ, ದೇವನಾಗರಿ ಲಿಪಿಯಲ್ಲಿರುವ ಸಂಸ್ಕೃತ ಭಾಷೆಯ "ಸತ್ಯಮೇವ ಜಯತೇ" ವಾಕ್ಯವನ್ನು, ಆದ್ಯತೆಯ ಕ್ರಮದಲ್ಲಿ, ಹೀಗೆ ಬದಲಿಸಬಹುದು:

೧. ಪರ್ಯಾಯ ವಾಕ್ಯ :

... ಅ) ಕನ್ನಡವೇ ಸತ್ಯ

... ಆ) ಕನ್ನಡವೇ ಸತ್ಯ ಕನ್ನಡವೇ ನಿತ್ಯ

... ಇ) ಸತ್ಯವೇ ನಮ್ಮ ತಾಯಿ ತಂದೆ (ಗೋವಿನ ಹಾಡು) ಇತ್ಯಾದಿ;

೨) ಭಾಷಾಂತರ ವಾಕ್ಯ :

... .ಅ) ಸತ್ಯವೇ ಗೆಲ್ಲುವುದು,

.... ಆ) ಸತ್ಯಕ್ಕೇ ಗೆಲುವು ಇತ್ಯಾದಿ;

೩) ಲಿಪ್ಯಂತರಣ : ಸತ್ಯಮೇವ ಜಯತೆ (ಕನ್ನಡ ಲಿಪಿಯಲ್ಲಿ).

ಇದು ಕೇವಲ ಸಿಂಬಾಲಿಕ ಬದಲಾವಣೆ ಅಲ್ಲ. ಕನ್ನಡ ಲಿಪಿ ಕನ್ನಡ ಸಂಸ್ಕೃತಿಯ ಅವಿಭಾಜ್ಯ ಅಂಗ. ನಮ್ಮ ಲಾಂಛನಕ್ಕೆ ಎಲ್ಲ ಅಂಗಗಳು ಇರಬೇಕು. ರಾಜ್ಯ ಲಾಂಛನವನ್ನು ಓದಲು ಆಗದಿರುವ ಕನ್ನಡ ವಿದ್ಯಾರ್ಥಿಗಳ ಕಲಿಕೆ ಅಪೂರ್ಣ ಎನಿಸಬಾರದು.

ಇಂತಹ ಬದಲಾವಣೆಗೆ ಕರ್ನಾಟಕ ಸರಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಕಾವಲು ಸಮಿತಿ, ವಿಶ್ವದಾದ್ಯಂತ ಹರಡಿರುವ ಕನ್ನಡ ಕೂಟಗಳು, ಮತ್ತಿತರ ಕನ್ನಡ ಸಂಘ ಸಂಸ್ಥೆಗಳ ಬೆಂಬಲ ಇದೆ ಎಂದು ಕನ್ನಡ ಕಲಿಗೆ ಭರವಸೆ ಇದೆ. ಕರ್ನಾಟಕ ಸರಕಾರ ಸೂಕ್ತ ಬದಲಾವಣೆಯೊಂದಿಗೆ ಹೊಸ ಲಾಂಛನವನ್ನು ಶೀಘ್ರವಾಗಿ ಜಾರಿಗೆ ತರಲಿ, ಕನ್ನಡಿಗರ ಹೆಮ್ಮೆಇಮ್ಮಡಿಯಾಗಲಿ.

ವಿಶ್ವೇಶ್ವರ ದೀಕ್ಷಿತ, ಅಧ್ಯಕ್ಷ, ಕನ್ನಡ ಕಲಿ

ಸಂಪರ್ಕ: president@kannadakali.org namovish@gmail.com

To view the English Text visit Kannadakali.com

Share for Success

Comment

108

Signatures