JCTU KARNATAKA 0

DEFEND THE 08 HOUR WORKDAY

836 people have signed this petition. Add your name now!
JCTU KARNATAKA 0 Comments
836 people have signed. Add your voice!
1%
Maxine K. signed just now
Adam B. signed just now

ರವರಿಗೆ,

ಮಾನ್ಯ ಮುಖ್ಯಮಂತ್ರಿಗಳು,

ಕರ್ನಾಟಕ ಸರ್ಕಾರ,

ಬೆಂಗಳೂರು.

ವಿಷಯ: ಎಂಟು ಗಂಟೆಗಳ ಕೆಲಸದ ದಿನವನ್ನು ಸಂರಕ್ಷಿಸಿ

ಮಾನ್ಯ ಮುಖ್ಯಮಂತ್ರಿಗೇ,

ಕರ್ನಾಟಕದ ಕಾರ್ಮಿಕ ಜಂಟಿ ಸಮಿತಿಗಳ ಪರವಾಗಿ (ಜೆಸಿಟಿಯು) INTUC, AITUC, CITU, HMS, AIUTUC, AICCTU, TUCC, HMKP ಮತ್ತು GATWU ವತಿಯಿಂದ ರಾಜ್ಯದ ಕಾರ್ಮಿಕ ವರ್ಗದ ಈ ಕೆಳಗಿನ ವಿಷಯಗಳ ಕುರಿತು ತಮ್ಮ ತುರ್ತು ಗಮನವನ್ನು ಸೆಳೆಯಲು ಬಯಸುತ್ತೇವೆ. ಕೋವಿಡ್-೧೯ ಕಾರಣದಿಂದ ವಿಧಿಸಲಾಗಿರುವ ಲಾಕ್'ಡೌನ್ ನಿಂದಾಗಿ ಸಂಘಟಿತ ಮತ್ತು ಅಸಂಘಟಿತ ಎರಡು ವಲಯದ ಕಾರ್ಮಿಕ ವರ್ಗದ ಜೀವನ ಮತ್ತು ಜೀವನಾಧಾರದ ಸಂಕಷ್ಟಕ್ಕೆ ಸಿಳುಕಿದೆ. ಈ ಹಿನ್ನೆಲೆಯಲ್ಲಿ ದುಡಿಯುವ ವರ್ಗದ ಸಂಕಷ್ಟವನ್ನು ಪರಿಹರಿಸಲು ಈ ಕೆಳಗಿನ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರದ ಗಮನ ಸೆಳೆಯಲು ಬಯಸುತ್ತೇವೆ.

ಎಂಟು ಗಂಟೆಗಳ ಕೆಲಸದ ದಿನವನ್ನು ಸಂರಕ್ಷಿಸಿ:

ಅಸಂಖ್ಯಾತ ತ್ಯಾಗ ಬಲಿದಾನದ ಮೂಲಕ ಅಂತರಾಷ್ಟ್ರೀಯ ಕಾರ್ಮಿಕ ವರ್ಗವು ಗಳಿಸಿರುವ ಹಕ್ಕು "ಎಂಟು ಗಂಟೆಗಳ ದಿನದ ಕೆಲಸದ ಹಕ್ಕು*. ಅಂತರಾಷ್ಟ್ರೀಯ ಮೇ ದಿನವು ಈ ತ್ಯಾಗ ಬಲಿದಾನ ಮತ್ತು ಹೋರಾಟಗಳನ್ನು ಸ್ಮರಿಸುವ ದಿನವಾಗಿದೆ. ಹಿಂದೆಂದೂ ಕಂಡರಿಯದಂತಹ ಕೋವಿಡ್ ೧೯ ಸಾಂಕ್ರಾಮಿಕತೆಯ ಈ ಸಂದರ್ಭದಲ್ಲಿ ಮಾಲೀಕರು ದಿನದ ಕೆಲಸದ ಅವಧಿಯನ್ನು ಹನ್ನೆರೆಡು (12) ಗಂಟೆಗಳಿಗೆ ಹೆಚ್ಚಿಸಬೇಕೆಬ ಬೇಡಿಕೆಯನ್ನು ಮುಂದಿರಿಸಿದ್ದಾರೆ. ಈ ಪ್ರತಿಗಾಮಿ ಕ್ರಮವನ್ನು ನಾವು ದೃಡವಾಗಿ ವಿರೋಧಿಸುತ್ತೇವೆ. ರಾಷ್ಟ್ರದ ನಿರುದ್ಯೋಗ ಪ್ರಮಾಣವು 26 ಶೇಕಡವನ್ನು ಮೀರಿರುವಂತಹ ಈ ಸಂದರ್ಭದಲ್ಲಿ ದಿನದ ಕೆಲಸದ ಅವಧಿಯ ಹೆಚ್ಚಳವು ನಿರುದ್ಯೋಗದ ದರವನ್ನು ಮತ್ತಷ್ಟು ಹೆಚ್ಚಿಸಿ ಒಟ್ಟಾರೆ ಆರ್ಥಿಕತೆಯನ್ನು ಸಂಕಷ್ಟಕ್ಕೆ ದೂಡಲಿದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲಿ ಒಂದಾಗಿರುವ ಭಾರತವು ಎಂಟು ಗಂಟೆಗಳ ಕೆಲಸದ ಅವಧಿಯ ನೂರನಲ್ವತ್ನಾಕ್ಕನೇ ಒಂಡಂಬಡಿಕೆ ಸಹಿ ಹಾಕಿದೆ. ಹಾಗಾಗೀ, ದಿನದ ಕೆಲಸದ ಅವಧಿಯ ಹೆಚ್ಚಳವು ಅಂತರಾಷ್ಟ್ರೀಯವಾಗಿ ಅಂಗೀಕೃತವಾಗಿರುವ ಒಂಡಂಬಡಿಕೆ ಉಲ್ಲಂಘನೆಯಾಗಲಿದೆ. ಆರ್ಥಿಕತೆಯಲ್ಲಿ ಪುನಶ್ಚೇತನವನ್ನು ಕಾಣಲು ಬೇಡಿಕೆಯ ಕೊರತೆಯನ್ನು ನೀಗಲು ಉದ್ಯೋಗವನ್ನು ಹೆಚ್ಚಿಸಲು ದಿನದ ಕೆಲಸದ ಅವಧಿಯನ್ನು 06 ಗಂಟೆಗಳಿಗೆ ಇಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇದು ಉತ್ಪಾದನೆಯ ಸ್ಥಳದಲ್ಲಿ ಕೋವಿಡ್ 19 ಸಾಂಕ್ರಾಮಿಕದ ಈ ಕಾಲದಲ್ಲಿ ದೈಹಿಕ ಅಂತರದ ನಿಯಮಗಳನ್ನು ಕೈಗಾರಿಕೆಗಳಲ್ಲಿ ಅರ್ಥಪೂರ್ಣಗೊಳಿಸಲಿದೆ.

ಕಾರ್ಮಿಕ ವರ್ಗದ ಈ ಕೆಳಗಿನ ಬೇಡಿಕೆಗಳನ್ನು ಪರಿಗಣಿಸಬೇಕೆಂದು ನಾವು ಒತ್ತಾಯಿಸುತ್ತೇವೆ.

1) ಲಾಕ್'ಡೌನ್ ಕಾಲವಧಿಯಲ್ಲಿ ಗುತ್ತಿಗೆ ಮತ್ತಿತ್ತರೆ ಖಾಯಾಂಮೇತರ ಕಾರ್ಮಿಕರನ್ನು ಒಳಗಂಡಂತೆ ಎಲ್ಲಾ ಕಾರ್ಮಿಕರ ಪೂರ್ಣ ವೇತನ ಮತ್ತು ಉದ್ಯೋಗಳನ್ನು ಸಂರಕ್ಷಿಸಬೇಕು.

2) ಲಾಕ್'ಡೌನ್ ಕಾಲವಧಿಯಲ್ಲಿ ಜೀವನೋಪಾಯವನ್ನು ಕಳೆದುಕೊಂಡಿರುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಹಣಕಾಸು ನೆರವನ್ನು ನೀಡಬೇಕು.

3) ವೇತನ ನೀಡದ ಮತ್ತು ಉದ್ಯೋಗ ನಷ್ಟಕ್ಕೆ ಕಾರಣವಾಗುವ ಮಾಲೀಕರ ಮೇಲೆ ಕಾರ್ಮಿಕ ಕಾನೂನುಗಳ ಉಲ್ಲಂಘನೆಯ ವಿರುದ್ದ ಬಿಗಿ ಕ್ರಮವಹಿಸಬೇಕು.

4) MNREGA ಮೂಲಕ ರೈತರು ಮತ್ತು ಭೂಹೀನ ಕೂಲಿ ಕಾರ್ಮಿಕರಿಗೆ ಆದಾಯದ ಬೆಂಬಲ ಕ್ರಮವನ್ನು ವಹಿಸಬೇಕು. ಸರ್ಕಾರವೇ ಕೃಷಿ ಉತ್ಪನ್ನಗಳನ್ನು ನ್ಯಾಯೋಚಿತ ಬೆಲೆ (ಕನಿಷ್ಟ ಬೆಂಬಲ ಬೆಲೆಗಿಂತ ಹೆಚ್ವು) ನೀಡಿ ಖರೀದಿಸಬೇಕು.

5) ಇ.ಎಸ್.ಐ ಮತ್ತು ಭವಿಷ್ಯ ನಿಧಿಯಂತಹ ಸಾಮಾಜಿಕ ಸುರಕ್ಷತಾ ಯೋಜನೆಗಳನ್ನು ಕಾರ್ಮಿಕ ಸಾಮಾಜಿಕ ಭದ್ರತೆಗೆ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಬಳಕೆ ಮಾಡಬಾರದು.

6) ಲಾಕ್'ಡೌನ್ ಕಾಲಾವಧಿಯ ವೇತನ ನೀಡಿಕೆಗೆ ಸಿ.ಎಸ್.ಆರ್. ನಿಧಿಯನ್ನು ಬಳಸಲು ಅನುವುಗೊಳಿಸಬೇಕು.

7) ಕೋವಿಡ್ ೧೯ ಪರಿಹಾರಕ್ಕೆಂದು ಸರ್ಕಾರಿ ಮತ್ತು ಖಾಸಗೀ ವಲಯದಿಂದ ಸಂಗ್ರಹಿಸಲಾಗುತ್ತಿರುವ ನಿಧಿಯನ್ನು ಮುಖ್ಯಂತ್ರಿ ಪರಿಹಾರ ನಿಧಿಗೆ ನೀಡಬೇಕೆ ವಿನಹಃ ಪಿ.ಎಂ.ಕೇರ್ಸ್ ನಿಧಿಗಲ್ಲ.

8) ಸರ್ವಾಜನಿಕ ಪಡಿತರ ವ್ಯವಸ್ಥೆಯನ್ನು ವಿಸ್ತರಿಸಿ ಸಾರ್ವತ್ರಿಕರಿಸಬೇಕು, ಮನೆ ಬಾಡಿಗೆ ನಿಯಂತ್ರಣ, ಶಾಲೆ ಮತ್ತು ಕಾಲೇಜು ಶುಲ್ಕಗಳ ಮನ್ನಾ, ಖಾಸಗೀ ಆರೋಗ್ಯ ಕ್ಷೇತ್ರದ ಮೇಲೆ ನಿಯಂತ್ರಣ ಮತ್ತು ಹಿಡಿತ ಸಾಧಿಸಬೇಕು.

9) ಫ್ರಂಟ್ ಲೈನ್ ಆರೋಗ್ಯ ಕಾರ್ಯಕರ್ತರಾಧ ಮುನಿಸಿಪಲ್ ಕಾರ್ಮಿಕರು, ಅಂಗನವಾಡಿ, ಆಶಾ,ಬಿಸಿಯೂಟ ನೌಕರರಿಗೂ ಆರೋಗ್ಯ ವಿಮಾ ಯೋಜನೆ ವಿಸ್ತರಿಸಬೇಕು. ವೈಯಕ್ತಿಕ ಸಂರಣ ಸಾಧನಗಳನ್ನು ಅಗತ್ಯ ಸಂಖ್ಯೆಯಲ್ಲಿ ಎಲ್ಲರಿಗೂ ಖಾತ್ರಿಗೊಳಿಸಬೇಕು.

The Chief Minister of Karnataka,

Government of Karnataka, Bangalore.

Dear Sir,

Subject : Measures in favour of the working class of the COVID19 pandemic

On behalf of the Joint Committee of Trade Unions (JCTU), Karnataka consisting of INTUC, AITUC, CITU, HMS, AIUTUC, AICCTU, TUCC, HMKP & GATWU we wish to draw your urgent attention to the following issues of the working class. The economic lockdown has had a terrible impact on the lives and livelihoods of the working class of both the organised and unorganised sector. In view of this, we urge the state government to consider and implement the following demands to alleviate the suffering of the working class.

Defend the 8 hour work day:

The eight hour work day is a hard won right of the international working class movement with countless sacrifices. The international May day is in fact is a day of remembrance of the sacrifices and the struggles to achieve the 8 hour work day. In the unprecedented times of the COVID19 infection, the employers are placing outrageous demands of increasing the workday to 12 hours. We are firmly opposed to the retrograde measure. At a time when the unemployment rate in the country has crossed 24 percent, such an increase in the work day will increase the unemployment rate and push the economy in to a deep crisis of lack of aggregate demand. We should also note that India as a founding member of the ILO is a signatory to the convention 144 mandating the 8 hour shift. Therefore any move to increase the work day is a direct violation of the internationally accepted convention. In fact, we demand that the work day should be reduced to 6 hours per shift in order to increase the employment, revive demand in the economy and thus aid the recovery of the economy. This will help maintain meaningful norms of physical distancing in the industry in the times of the COVID19 pandemic.

Further we also urge the Government to consider the following demands of the working class.

  • Full wages and protection of jobs during the times of the lockdown to all workers including contract and all flexible labourers.
  • Income support for all unorganized workers who have lost their livelihoods during the lockdown
  • Strict enforcement of law and labour violations by the employers in matters of non-payment of wages and job loss.
  • Income support measures for farmers and landless labourers through the MGNREGA scheme, procurement of agricultural produce at fair price (greater than the MSP) by the Government.
  • Against the diversion of social security schemes of ESI and PF for any other purpose other than social security of the workers.
  • Allow CSR funds to be used for wage payments during the period of the lockdown.
  • All funds collected either by Government or private sector for COVID19 relief to be deposited only in to the CM relief fund instead of mandating deposits in to PM-CARES fund.
  • Expansion and universalization of PDS, Rent control, waiver of school and college fees, control and regulation of private healthcare facilities.
  • Frontline health workers including Municipal Workers, Anganwadi, ASHA, Miday Day meal workers to be covered under Health Insurance Scheme and ensure adequate supply of PPE's.

Share for Success

Comment

836

Signatures