Raghavendra S R 0

Advocates' representation cum Appeal to KSBC- COVID-19 Impact

682 people have signed this petition. Add your name now!
Raghavendra S R 0 Comments
682 people have signed. Add your voice!
69%
Maxine K. signed just now
Adam B. signed just now

(Translated to English is also available below)

ಮಾನ್ಯ ಅಧ್ಯಕ್ಷರು,

ಕರ್ನಾಟಕ ರಾಜ್ಯ ವಕೀಲ ಪರಿಷತ್ತು,

ಬೆಂಗಳೂರು,

ಮಾನ್ಯರೇ,

ವಿಷಯ : 'ಕರ್ನಾಟಕ ರಾಜ್ಯ ನ್ಯಾಯವಾದಿಗಳ ಕಲ್ಯಾಣ ನಿಧಿ ಕಾಯ್ದೆ, 1983'ಗೆ ತಿದ್ದುಪಡಿ ತಂದು ಕೋವಿಡ್-19 ನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್ಡೌನ್ನಿಂದ ತೀರ್ವ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವಕೀಲರ ಅಳಲಿಗೆ ಸ್ಪಂದಿಸಲು ಪ್ರಸ್ತಾವನೆ ಮತ್ತು ಮನವಿ.

ರಾಜ್ಯದ ಜನರಿಗೆ ದಕ್ಷ ಕಾನೂನು ಸೇವೆಯನ್ನು ನೀಡುವುದು ಮತ್ತು ಕಾನೂನು ವೃತ್ತಿಗೆ ಸಾಮಾಜಿಕ ರಕ್ಷಣೆಯನ್ನು ಒದಗಿಸುವ ಉದ್ಧೇಶದಿಂದ ಈ ನಮ್ಮ ರಾಜ್ಯ ವಕೀಲ ಪರಿಷತ್ತು 'ಕರ್ನಾಟಕ ರಾಜ್ಯ ನ್ಯಾಯವಾದಿಗಳ ಕಲ್ಯಾಣ ನಿಧಿ ಕಾಯ್ದೆ, 1983'ನ್ನು ಜಾರಿಗೆ ತರಲಾಗಿದೆ. ಈ ಸಾಮಾಜಿಕ ರಕ್ಷಣೆಯು ವೃತ್ತಿ ನಿಲ್ಲಿಸಿದ ಸದಸ್ಯರಿಗೆ ಮುಂದಿನ ಜೀವನೋಪಾಯಕ್ಕೆ ಒಟ್ಟಾರೆಯಾಗಿ ಒಂದಿಷ್ಟು ಮೊತ್ತವನ್ನು ನೀಡುವುದು. ಅಲ್ಲದೆ ಒಂದು ವೇಳೆ ಸದಸ್ಯನು ವೃತ್ತಿ ನಡೆಸುತ್ತಿರುವ ಸಂಧರ್ಭದಲ್ಲಿಯೇ ಮರಣವಾದರೆ ಅವರ ಅವಲಂಬಿತರಿಗೆ ಅಥವಾ ವಾರಸುದಾರರಿಗೆ ನಿರ್ದಿಷ್ಟ ಮೊತ್ತ ನೀಡಿ ಅವರಿಗೆ ಆರ್ಥಿಕ ಸ್ಥೈರ್ಯವನ್ನು ತುಂಬುವ ಮೂಲಕ ಸಾಮಾಜಿಕ ಸಮತೋಲನ ಕಾಪಾಡುವ ಉದ್ದೇಶದಿಂದ ನ್ಯಾಯವಾದಿಗಳ ಕಲ್ಯಾಣ ನಿಧಿಯು ವಕೀಲರ ಸ್ವಯಂ ಪ್ರೇರಿತ ವಂತಿಕೆ, ಸರ್ಕಾರದ ಅನುದಾನ, ಹಾಗೂ ವಕೀಲ ಪರಿಷತ್ತು ವಿತರಿಸುವ ಕಲ್ಯಾಣ ನಿಧಿ ಚೀಟಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ. ಸಂದರ್ಭಾನುಸಾರ ತಿದ್ದುಪಡಿ ತಂದು ಪ್ರಸ್ತುತ ವಕೀಲ ವೃತ್ತಿಯಲ್ಲಿ 15 ವರ್ಷ ಒಳಗಿರುವವರಿಗೆ 4 ಲಕ್ಷ, 15 ರಿಂದ 35 ವರ್ಷ ವೃತ್ತಿಯಲ್ಲಿರುವವರಿಗೆ 6 ಲಕ್ಷ ಮತ್ತು 35 ವರ್ಷ ಮೇಲ್ಪಟ್ಟ ವೃತ್ತಿದಾರರಿಗೆ 8 ಲಕ್ಷ ರೂಪಯಿಗಳನ್ನು ವಕೀಲರು ನಿವೃತ್ತಿ ಬಯಸಿದರೆ ಅಥವಾ ಮರಣ ಹೊಂದಿದರೆ ಅವರ ಅವಲಂಬಿತರಿಗೆ ಕೊಡಬಹುದಾಗಿರುತ್ತದೆ. ಅಷ್ಟೇ ಅಲ್ಲದೆ, ಕಲ್ಯಾಣ ನಿಧಿ ಕಾಯ್ದೆ ಪರಿಚ್ಚೇದ 16(ಬಿ) ಪ್ರಕಾರ 65 ವರ್ಷ ವಯಸ್ಸಿಗೂ ಮೇಲ್ಪಟ್ಟ, ಕನಿಷ್ಠ 20 ವರ್ಷ ವೃತ್ತಿಯಲ್ಲಿರುವ ಮತ್ತು ಕನಿಷ್ಠ 12 ವರ್ಷದಿಂದ ಕಲ್ಯಾಣ ನಿಧಿ ಸದಸ್ಯತ್ವ ಹೊಂದಿರುವ ವಕೀಲರು ತೀರ್ವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, ಅವರಿಗೆ ಜೀವನದಲ್ಲಿ ಒಂದೇ ಒಂದು ಬಾರಿ ಮಾತ್ರ ನಿವೃತ್ತಿ ಅಥವಾ ಮರಣದ ಒಳಗೆ ಕಲ್ಯಾಣ ನಿಧಿಯಿಂದ ಅಂತಿಮ ಮೊತ್ತದ 50% ದಷ್ಟು ಅಥವಾ 1 ಲಕ್ಷ 50 ಸಾವಿರ ರೂಪಾಯಿ ಇವುಗಳಲ್ಲಿ ಯಾವುದು ಕಡಿಮೆಯೋ ಆ ಮೊತ್ತವನ್ನು ನೀಡಬಹುದಾಗಿರುತ್ತದೆ.

ಜಗತ್ತು ಈ ಹಿಂದೆ ಕಂಡಿರದ ಕೋವಿಡ್-19 ವೈರಾಣು ಪ್ರಪಂಚದಾದ್ಯಂತ ಸೋಂಕು ಹರಡುವುದನ್ನು ತಡೆಗಟ್ಟಲು ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿವೆ. ಭಾರತವೂ ಕೂಡ ಕಳೆದ 40 ದಿನಗಳಿಂದ ಸ್ಥಬ್ದವಾಗಿದೆ. ಕರ್ನಾಟಕದಲ್ಲಿ ವಕೀಲರು ಮಾರ್ಚ 14 ರಿಂದ ಮುಂದಿನ ಮೇ 17ರ ವರೆಗೆ ಅಂದರೆ, ಸತತ 65 ದಿನಗಳಿಂದ ಕೆಲಸವಿಲ್ಲದೆ, ದುಡಿಮೆಯಿಲ್ಲದೆ ತಮ್ಮ ಮನೆಗಳಲ್ಲೇ ಇರುವಂತಾಗಿದೆ. ಈಗಿನ ಪರಿಸ್ಥಿತಿ ಗಮನಿಸಿದಾಗ ಇನ್ನೂ ಒಂದೆರಡು ತಿಂಗಳು ಲಾಕ್ಡೌನ್ ಮುಂದುವರೆಸುವ ಸ್ಪಷ್ಟ ಸೂಚನೆಗಳಿವೆ. ಈಗಾಗಲೇ ವಕೀಲರು ಲಾಕ್ಡೌನ್ನಿಂದ ಇತ್ತ ನ್ಯಾಯಾಲಯಗಲ್ಲೂ ಮತ್ತು ಕಛೇರಿಯಲ್ಲೂ ಕೆಲಸವಿಲ್ಲದೆ ತೀರ್ವ ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ರಾಜ್ಯದ ಜನರಲ್ಲಿ ಆರ್ಥಿಕ ಚೇತರಿಕೆಯಾಗಲೂ ಮತ್ತು ಎಂದಿನಂತೆ ಸಾಮಾನ್ಯ ಜೀವನ ನಡೆಸಲು ಕನಿಷ್ಠ ಪಕ್ಷ ಮುಂದಿನ 2 ರಿಂದ 3 ತಿಂಗಳು ಸಮಯ ತೆಗೆದುಕೊಳ್ಳುವ ನಿರೀಕ್ಷೆ ಇದೆ. ವಕೀಲರು ಅವರ ಜೊತೆ ಕುಟುಂಬ ವರ್ಗದ ಅಗತ್ಯಗಳನ್ನು ನೋಡಿಕೋಳ್ಳುವುದಲ್ಲದೆ, ಮನೆಯಲ್ಲಿರುವ ಮಕ್ಕಳು ಹಾಗೂ ಹಿರಿಯ ನಾಗಾರೀಕರ ಮೇಲೆ ಕೊರೋನಾ ವೈರಾಣು ಬೇಗ ದುಷ್ಪರಿಣಾಮ ಬೀರುವುದರಿಂದ ಅವರ ಆರೋಗ್ಯದ ಬಗ್ಗೆ ಈ ಸಂದರ್ಭದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗಿರುತ್ತದೆ. ರಾಜ್ಯದಾದ್ಯಂತ ಇರುವ ಹಲವಾರು ವಕೀಲರು ತಮ್ಮ ಹಾಗೂ ಅವರ ಅವಲಂಬಿತರ ಆಹಾರ, ವೈದ್ಯಕೀಯ, ತಮ್ಮ ಮನೆ ಬಾಡಿಗೆ ಮತ್ತು ಕಚೇರಿ ಬಾಡಿಗೆ ಕಟ್ಟಲು, ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ಮತ್ತಿತರ ದೈನಂದಿನ ಖರ್ಚು-ವೆಚ್ಚ ನೋಡಿಕೊಳ್ಳುವುದು ದುಸ್ಥರವಾಗಿದೆ. ಇದರೊಂದಿಗೆ ಸಾಲದ ಕಂತು ಮತ್ತು ಮಕ್ಕಳ ವಿದ್ಯಾಭ್ಯಾಸದ ಶುಲ್ಕ ಹೆಚ್ಚಿನ ಹೊರೆಯಾಗಿದೆ.

ಮಾನ್ಯ ಪ್ರಧಾನ ಮಂತ್ರಿಯವರು ಲಾಕ್ಡೌನ್ ಘೋಷಿಸಿದ ದಿನವೇ ಭಾರತೀಯ ವಕೀಲ ಪರಿಷತ್ತು ಮಾನ್ಯ ಪ್ರಧಾನ ಮಂತ್ರಿ ಮತ್ತು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು 21 ದಿನಗಳ ಲಾಕ್ಡೌನ್ ಘೋಷಣೆಯಿಂದ ದೇಶದಾದ್ಯಂತ ಬಹುತೇಕ ವಕೀಲರು ಅತಂತ್ರರಾಗಲಿದ್ದು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಲಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಅಥವಾ ಎರಡೂ ಜೊತೆಗೂಡಿ ದೇಶದ ವಕೀಲರಿಗೆ ಅದರಲ್ಲೂ ಯುವ ವಕೀಲರಿಗೆ ಮತ್ತು ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ವಕೀಲರಿಗೆ ಮಾಸಿಕ ರೂ.20,000/-ಗಳನ್ನು ಆರ್ಥಿಕ ಸಹಾಯ ಕೋರುವವರಿಗೆ ನೇರವಾಗಿ ಅಥವಾ ರಾಜ್ಯ ವಕೀಲ ಪರಿಷತ್ತಿನ ಕಲ್ಯಾಣ ನಿಧಿಯ ಮೂಲಕ ನೀಡಲು ಆರ್ಥಿಕ ನೆರವು ನೀಡಬೇಕೆಂದು ಈಗಾಗಲೇ ಮನವಿ ಮಾಡಿದೆ. ತಾವೂ ಕೂಡ ಮಾನ್ಯ ಪ್ರಧಾನ ಮಂತ್ರಿ ಮತ್ತು ಮುಖ್ಯ ಮಂತ್ರಿಗಳಿಗೆ ಪತ್ರ ಬರೆದು ರಾಜ್ಯ ವಕೀಲರ ಪರ ಪರಿಷತ್ತಿಗೆ ವಿಶೇಷ ಅನುದಾನ ಕೋರಿರುವುದು ತಮಗೆ ರಾಜ್ಯದ ವಕೀಲ ಸಮುದಾಯದ ಬಗ್ಗೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ.

ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರು ಕೋವಿಡ್-19 ತಡೆಗಟ್ಟಲು ಲಾಕ್ಡೌನ್ ಪರಿಣಾಮವಾಗಿ ತೊಂದರೆಗೆ ಒಳಗಾಗಿರುವ ಕೃಷಿಕರು, ಕ್ಷೌರಿಕರು, ಅಗಸರು, ಆಟೋ/ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರು ಹಾಗೂ ಇತರರಿಗೆ ಕರ್ನಾಟಕ ಸರ್ಕಾರದಿಂದ ರೂ. 1610/- ಕೋಟಿ (ಒಂದು ಸಾವಿರದ ಹತ್ತು ಕೋಟಿ ರೂಪಾಯಿ)ಯ ನೆರವು ಘೋಷಿಸಿ ತಳ ಸಮುದಾಯದ ಕಷ್ಟಗಳಿಗೆ ನೆರವಾಗಿದ್ದಾರೆ. ಅಂದು ಮಾನ್ಯ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಅಧೀವೇಶನ ಕರೆಯುವ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಪ್ರಸ್ತಾವಿಸಿದ್ದಾರೆ. ಆದರೆ ತೀರಾ ಸಂಕಷ್ಟದಲ್ಲಿರುವ ಹಲವಾರು ವಕೀಲರು ಇತ್ತ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿ ಅತಂತ್ರ ಸ್ಥಿತಿಯಲ್ಲಿರುವಂತಾಗಿದೆ.

ಇತ್ತೀಚೆಗೆ ಭಾರತೀಯ ವಕೀಲ ಪರಿಷತ್ತಿನಿಂದ ರೂ.45,00,000/- (ನಲವತೈದು ಲಕ್ಷ ರೂಪಾಯಿ) ಸಹಾಯವನ್ನು ರಾಜ್ಯ ವಕೀಲರಿಗೆ ಹಂಚಲು ಪರಿಷತ್ತಿಗೆ ನೀಡಿರುವುದನ್ನು ಅಭಿನಂದಿಸುತ್ತೇವೆ. ಇತ್ತೀಚೆಗೆ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ನೇತ್ರತ್ವದ ವಿಭಾಗೀಯ ಪೀಠವು ರಿಟ್ ಅರ್ಜಿ ಸಂಖೈ 6695/2020 ಮತ್ತು 6696/2020ಯನ್ನು ಇತ್ಯರ್ಥ ಮಾಡಿದೆ. ಅದರಂತೆ ರಾಜ್ಯ ವಕೀಲ ಪರಿಷತ್ತಿನಿಂದ ರೂ.2 ಕೋಟಿ ಮತ್ತು ಭಾರತೀಯ ವಕೀಲ ಪರಿಷತ್ತು ಕೊಟ್ಟಿರುವ ರೂ.45 ಲಕ್ಷ, ಒಟ್ಟು 2 ಕೋಟಿ 45 ಲಕ್ಷ ರೂಪಾಯಿಗಳನ್ನು 10 ವರ್ಷದೊಳಗಿನ ವಕೀಲರಿಗೆ ನೀಡಲು ಹಿರಿಯ ವಕೀಲರು ಮತ್ತು ಇತರರಿಂದ ದಾನ ಪಡೆದು ಎಲ್ಲಾ ವಕೀಲರಿಗೂ ಹಣಕಾಸಿನ ಸಹಾಯ ಮಾಡಲು ವಿವಿಧ ಮಾರ್ಗಗಳನ್ನು ಪರ್ಯಾಲೋಚಿಸಲು ತಿಳಿಸಿರುವುದು ನಮ್ಮಗಳ ಗಮನದಲ್ಲಿದೆ.

ಲಾಕ್ಡೌನ್ ಘೋಷಣೆಯ ದಿನದಿಂದ ಇಲ್ಲಿಯವರೆಗೆ ರಾಜ್ಯ ವಕೀಲ ಪರಿಷತ್ತು ಮತ್ತು ಅದರ ಸದಸ್ಯರು ವಕೀಲ ಸಂಘದೊಂದಿಗೆ ಚರ್ಚಿಸಿ ವಕೀಲರಿಗೆ ನೆರವು ನೀಡುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳನ್ನು ನಡೆಸಿರುವುದು ತಿಳಿದುಬಂದಿದೆ. ಹಿಂದೆಂದೂ ಕಾಣದಂತಹ ವಿಶ್ವವೇ ಸ್ಥಬ್ಧವಾಗುವ ಈ ಕಠೀಣ ಪರಿಸ್ಥಿತಿಯನ್ನು ಯಾರೂ ಊಹಿಸಿರುವುದಿಲ್ಲ. ರಾಜ್ಯ ವಕೀಲ ಪರಿಷತ್ತು ಕೂಡ ತನ್ನ ಇತಿಮಿತಿಯಲ್ಲಿಯೇ ಇಲ್ಲಿಯವರೆವಿಗೂ ನಿರಾತಂಕವಾಗಿ ನಡೆದುಕೊಂಡು ಬಂದಿದ್ದು, ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ವಕೀಲರಿಗೆ ಉದಾರವಾಗಿ ಸಹಾಯಹಸ್ತ ಚಾಚಲು ಅಸಹಾಯಕವಾಗಿದೆ. ಆದ್ದರಿಂದ ರಾಜ್ಯ ವಕೀಲ ಪರಿಷತ್ತು ಕೂಡ ಅನೇಕ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುವುದು ನಾವು ನೋಡುತ್ತಿದ್ದೇವೆ. ಆದ್ದರಿಂದ ಈ ಪ್ರಸ್ತಾವವನ್ನು ತಾವುಗಳು ಒತ್ತಡವೆಂಬಂತೆ ಭಾವಿಸದೇ ನೋಂದ ನೋವುಗಳ ಅಳಲೆಂದು ಭಾವಿಸಿ ಪರ್ಯಾಯ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪರಾಮರ್ಶೀಸಬೇಕಾಗಿ ಕೇಳಿಕೊಳ್ಳುತ್ತೇವೆ. ರಾಜ್ಯ ವಕೀಲ ಪರಿಷತ್ತಿನ ಮೂಲಕ ವಕೀಲರಿಗೆ ನೆರವಿನ ಹಸ್ತ ಚಾಚಲು ಕೆಲವೊಂದು ಮಾರ್ಗೋಪಾಯಗಳನ್ನು ಹಾಗೂ ಬೇಡಿಕೆಯನ್ನು ನಿಮ್ಮ ಮುಂದೆ ಪ್ರಸ್ತಾವಿಸುತ್ತಿದ್ದೇವೆ.

1. ಸನ್ಮಾನ್ಯ ಪ್ರಧಾನ ಮಂತ್ರಿ ಮತ್ತು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಮರು ಮನವಿ ಮಾಡಿ ರಾಜ್ಯದ ವಕೀಲರಿಗೆ ರೂ.50 ಕೋಟಿ (ಐವತ್ತು ಕೋಟಿ ರೂಪಾಯಿ) ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೋರುವುದು.

2. ಮಾನ್ಯ ಮುಖ್ಯಮಂತ್ರಿಗಳು ಶೀಘ್ರದಲ್ಲಿಯೇ ಅಧೀವೇಶನ ಕರೆಯಲಿದ್ದು, ಸದನದಲ್ಲಿ 'ಕರ್ನಾಟಕ ರಾಜ್ಯ ನ್ಯಾಯವಾದಿಗಳ ಕಲ್ಯಾಣ ನಿಧಿ ಕಾಯ್ದೆ, 1983'ಗೆ ಅಗತ್ಯವಿರುವ ಎಲ್ಲಾ ವಕೀಲರಿಗೆ ಹಣಕಾಸಿನ ನೆರವು ನೀಡಲು ಅಗತ್ಯ ತಿದ್ದುಪಡಿ ರೂಪುರೇಷೆ ರೂಪಿಸಿ ಅಧಿವೇಶನದಲ್ಲಿ ಮಂಡಿಸುವ ಕ್ರಮಕ್ಕೆ ಕೋರಿಕೆ.

3. ಪ್ರಸ್ತುತ ವಕೀಲ ವೃತ್ತಿಯಲ್ಲಿ 15 ವರ್ಷ ಒಳಗಿರುವವರಿಗೆ 4 ಲಕ್ಷ, 15 ರಿಂದ 35 ವರ್ಷ ವೃತಿಯಲ್ಲಿರುವವರಿಗೆ 6 ಲಕ್ಷ ಮತ್ತು 35 ವರ್ಷ ಮೇಲ್ಪಟ್ಟ ವೃತ್ತಿದಾರರಿಗೆ 8 ಲಕ್ಷ ರೂಪಯಿಗಳನ್ನು ವಕೀಲರು ನಿವೃತ್ತಿ ಬಯಸಿದರೆ ಅಥವಾ ಮರಣ ಹೊಂದಿದರೆ ಅವರ ಅವಲಂಬಿತರಿಗೆ ಪರಿಷತ್ತು ನೀಡುತ್ತಾ ಬರುತ್ತಿದೆ. ಕೋವಿಡ್-19ನ್ನು ತಡೆಯುವುದಕ್ಕಾಗಿ ಇಡೀ ದೇಶವೇ ಲಾಕ್ಡೌನ್ ಆಗಿದ್ದು, ವಕೀಲರು ನ್ಯಾಯಾಲಯಕ್ಕೆ ಹಾಜಾರಾಗುವುದಿರಲಿ ಕನಿಷ್ಠ ಪಕ್ಷ ಕಚೇರಿ ನಡೆಸಲು ಅಥವಾ ಮನೆಯಲ್ಲಿಯೇ ಕಕ್ಷೀದಾರರಿಗೆ ಕಾನೂನು ಸಲಹೆ ನೀಡುವುದೂ ಸಾಧ್ಯವಿಲ್ಲದಿರುವ ಈ ಸಂದರ್ಭವನ್ನು 'ಅಪರೂಪದಲ್ಲಿ ಅಪರೂಪದ ತುರ್ತು ಸನ್ನೀವೇಶ' ಎಂದು ಪರಿಗಣಿಸಿ, ಕೂಡಲೇ ಎಲ್ಲಾ ವಕೀಲ ಸಂಘಗಳ ಅಭಿಪ್ರಾಯ ಪಡೆದು ಹಿರಿಯ ವಕೀಲರೊಂದಿಗೆ ಸಮಾಲೋಚಿಸಿ ಅರ್ಜಿ ಸಲ್ಲಿಸುವ ಎಲ್ಲಾ ವಕೀಲರಿಗೆ ಅವರ ವೃತ್ತಿ ವರ್ಷಾಧರಿತ ಅಂತಿಮ ಕಲ್ಯಾಣ ನಿಧಿ ಮೊತ್ತದಿಂದ ಅವಶ್ಯವಿರುವ ವಕೀಲರಿಗೆ ಗರಿಷ್ಠ 25% ಮೊತ್ತವನ್ನು ಬಿಡುಗಡೆಗೊಳಿಸುವುದು.

4. 'ಕರ್ನಾಟಕ ರಾಜ್ಯ ನ್ಯಾಯವಾದಿಗಳ ಕಲ್ಯಾಣ ನಿಧಿ ಕಾಯ್ದೆ, 1983'ರ ಕಲಂ 16(ಬಿ) ನಲ್ಲಿ ತಿಳಿಯಪಡಿಸಿರುವ ಷರತ್ತುಗಳನ್ನು ಸಡಿಲಿಸಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಎಲ್ಲಾ ವಕೀಲರಿಗೆ ಕನಿಷ್ಠ ರೂ. 50,000/- (ಐವತ್ತು ಸಾವಿರ ರೂಪಾಯಿ)ಗಳನ್ನು ಮಂಜೂರು ಮಾಡುವುದು ಮತ್ತು ಅಂತಿಮ ಮೊತ್ತವನ್ನು ನೀಡುವಾಗ ಈ ಮೊತ್ತವನ್ನು ಕಡಿತಗೊಳಿಸುವುದು.

5. ಪ್ರಸ್ತುತ ಕಾಯ್ದೆಗೆ ಕಲಂ 16(ಸಿ) ಸೇರ್ಪಡೆಗೊಳಿಸಲು ತಿದ್ದುಪಡಿಗೆ ಕ್ರಮ ತೆಗೆದುಕೊಂಡು, ಆರೋಗ್ಯ ತುರ್ತುಪರಿಸ್ಥತಿ ಅಥವಾ ನೈಸರ್ಗಿಕ ವಿಕೋಪಗಳಿಂದ ಆರ್ಥಿಕ ಸಂಕಷ್ಟಕ್ಕೊಳಗಾದ ವಕೀಲರಿಗೆ ತುರ್ತು ನೆರವನ್ನು ನೀಡುವುದು.

6. ಈ ಹಿಂದೆ 'ಕರ್ನಾಟಕ ರಾಜ್ಯ ನ್ಯಾಯವಾದಿಗಳ ಕಲ್ಯಾಣ ನಿಧಿ ಕಾಯ್ದೆ, 1983'ಯಲ್ಲಿದ್ದಂತೆ 'ವಕೀಲರ ಕುಟುಂಬ ಕಲ್ಯಾಣ ನಿಧಿ' (The Advocates Family Welfare Fund) ನ್ನು ಮರುಸ್ಥಾಪಿಸಿ, ಕೋವಿಡ್-19ರಂತೆ ಇನ್ನು ಮುಂದೆ ಯಾವುದೇ ಸಂಧರ್ಭದಲ್ಲಿ ಆರೋಗ್ಯ ತುರ್ತುಪರಿಸ್ಥಿತಿಗಳು ಬಂದರೂ ವಕೀಲರು ಮತ್ತು ಅವರ ಕುಟುಂಬ ನಿರ್ವಹಣೆಗೆ ಸಹಾಯವಾಗುವ ನೆರವನ್ನು ನೀಡಲು ಮುಂದಾಗಬೇಕು.

7. ಮುಂದೆ ಆಗಬಹುದಾದ ನೈಸರ್ಗಿಕ ವಿಕೋಪ ಅಥವಾ ಇನ್ನಾವುದೇ ಅನಾಹುತಗಳಿಂದ ನೊಂದ ವಕೀಲರಿಗೆ ಶೀಘ್ರವೇ ಪರಿಹಾರ ನೀಡಲು ಪ್ರತ್ಯೇಕ ನಿಧಿ ಹುಟ್ಟುಹಾಕುವುದು.

8. ಕಲ್ಯಾಣ ನಿಧಿ ಕಾಯ್ದೆಯ ಕಲಂ 18ರಲ್ಲಿ ತಿಳಿಸಿದಂತೆ, ಪರಿಷತ್ತು ಈಗಾಗಲೇ ರೂಪಿಸಿರುವ 'ನ್ಯಾಯ ಕವಚ' ಗುಂಪು ವಿಮೆಯನ್ನು ಶೀಘ್ರವೇ ಜಾರಿಗೆ ತರುವುದು.

9. ವಕೀಲರ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಗುಮಾಸ್ಥರಿಗಾಗಿ ಕಲ್ಯಾಣ ನಿಧಿ ಕಾಯ್ದೆಯ ಕಲಂ 27ರಲ್ಲಿ ಹೇಳಿದಂತೆ 'ಕರ್ನಾಟಕ ನೊಂದಾಯಿತ ಗುಮಾಸ್ಥರ ಕ್ಷೇಮಾಭಿವೃದ್ದಿ ನಿಧಿ'ಯನ್ನು ಪ್ರಾರಂಭಿಸಿ ವಕೀಲರ ಗುಮಾಸ್ತರರಿಗೂ ಸಹಾಯಹಸ್ತ ನೀಡಲು ಮುಂದಾಗಬೇಕು.

10. ಕಾಯ್ದೆಯ ಕಲಂ 76(ಅ)ರಲ್ಲಿ ಹೇಳಿದಂತೆ ವಕೀಲರ ಸಾಮಾಜಿಕ ಭದ್ರತೆಯ ದೃಷ್ಟಿಯಿಂದ 'ಕಾನೂನು ಅನುಕೂಲ ನಿಧಿ' (Legal Benefit Fund) ಆರಂಭಿಸಿ ಅದರಿಂದಲೂ ವಕೀಲರಿಗೆ ನೆರವಾಗಬೇಕು.

11. ಕಲ್ಯಾಣ ನಿಧಿ ಕ್ರೂಡೀಕರಣಕ್ಕಾಗಿ ವಿವಿಧ ನ್ಯಾಯಾಲಯಗಳಲ್ಲಿ ಸರ್ಕಾರ ಹಾಗೂ ವಿವಿಧ ನಿಗಮ-ಮಂಡಳಿ, ಪೌರಾಡಳಿತ ಸಂಸ್ಥೆ, ವೈಯಕ್ತಿಕ ವ್ಯಕ್ತಿ ಅಥವಾ ಸ್ವಯಂ ಸೇವಾ ಸಂಸ್ಥೆಗಳನ್ನು ಹೊರತುಪಡಿಸಿ ದಾವಾ ಹೂಡುವ ಕಾರ್ಪೋರೇಟ್ ಕಂಪನಿಗಳಿಂದ, ಬ್ಯಾಂಕ್ಗಳಿಂದ ಅಥವಾ ಇನ್ನಿತರ ನಿಕಾಯಗಳಿಂದ ನ್ಯಾಯಾಲಯ ಶುಲ್ಕದ 1% (ಶೇಕಡಾ ಒಂದು)ರಷ್ಟನ್ನು ವಕೀಲರ ಕಲ್ಯಾಣ ನಿಧಿಗೆ ಜಮೆಯಾಗುವಂತೆ ಸಂಬಂಧಪಟ್ಟ ಕ್ರಮ ತೆಗೆದುಕೊಳ್ಳುವುದು.

12. ನ್ಯಾಯಾಲಯಗಳು ದಾವಾ ಸಂದರ್ಭದಲ್ಲಿ ಹಾಕಲಾಗುವ ದಂಡಗಳನ್ನು ವಕೀಲರ ಹಿತಾಸಕ್ತಿಗೆ ಆಯಾ ಜಿಲ್ಲಾ ಅಥವಾ ತಾಲೂಕು ವಕೀಲ ಸಂಘಗಳಿಗೆ ಜಮೆಯಾಗುವಂತೆ ಅಥವಾ ಕಲ್ಯಾಣ ನಿಧಿಗೆ ಜಮೆಯಾಗುವಂತೆ ಸಂಬಂಧಪಟ್ಟ ಕ್ರಮ ತೆಗೆದುಕೊಳ್ಳುವುದು.

ಮಹಾಮಾರಿ ವೈರಾಣು ಕೋವಿಡ್-19ರ ವಿರುದ್ದ ಎಲ್ಲಾರೂ ಒಗಟ್ಟಾಗಿ ಎದುರಿಸಬೇಕಾದ ಈ ಸಂಧರ್ಭದಲ್ಲಿ ಅನೇಕ ಕಿರಿಯ ವಕೀಲರು ಹಾಗೂ ಇತರ ಆರ್ಥಿಕ ಸಂಕಷ್ಟದ ನಿವಾರಣೆಗೆ ಶತಪ್ರಯತ್ನ ಮಾಡುತ್ತಿದ್ದು, ದುಂದುವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ. ಬೆಂಗಳೂರು ವಕೀಲ ಸಂಘ ತನ್ನ ಔದಾರ್ಯತೆ ಮೆರೆದು ವೃತ್ತಿಯಲ್ಲಿ 5 ವರ್ಷದೊಳಗಿರುವ ಸುಮಾರು 368 ಜನ ಕಿರಿಯ ವಕೀಲರಿಗೆ ರೂ.5,000/- ದಂತೆ ಸಹಾಯಹಸ್ತ ಚಾಚಿದೆ. ಇತರ ವಕೀಲ ಸಂಘಗಳು ತನ್ನ ಸದಸ್ಯ ವಕೀಲರಿಗೆ ಆಹಾರ ಧಾನ್ಯ, ತರಕಾರಿಗಳನ್ನು ಹಂಚುವುದರ ಮೂಲಕ ತಮ್ಮ ಕೈಲಾದಷ್ಟು ನೆರವಿಗೆ ಬಂದಿವೆ. ಈಗಾಗಲೇ ಒಂದಷ್ಟು ಹಿರಿಯ ವಕೀಲರು, ಲಾ ಫರ್ಮ್ಗಳು ತಮ್ಮ ಜೊತೆ ಕೆಲಸ ಮಾಡುವ ವಕೀಲರು ಮತ್ತು ಸಹಾಯಕರಿಗೆ ಸರ್ಕಾರದ ನಿರ್ದೇಶನದಂತೆ 2 ತಿಂಗಳ ಸಂಬಳ ನೀಡಿ ಲಾಕ್ಡೌನ್ಗೆ ಬೆಂಬಲ ನೀಡಿವೆ. ಕೆಲವು ಹಿರಿಯ ವಕೀಲರು ತಮ್ಮ ಕಚೇರಿಯ ಕಿರಿಯ ವಕೀಲರರಿಗೆ ತಮ್ಮಿಂದಾದಷ್ಟು ಸಹಾಯವನ್ನು ಮಾಡಿದ್ದಾರೆ. ಇನ್ನೂ ಕೆಲವು ಮಾನವೀಯ ಗುಣಹೊಂದಿರುವ ವಕೀಲ ವೃತ್ತಿಯ ಗೌರವವನ್ನು ಉಳಿಸಲು ವಿವಿಧ ಜಿಲ್ಲೆ, ತಾಲೂಕಿನ ಅಶಕ್ತ ಕಿರಿಯ ವಕೀಲರಿಗೆ ತಮ್ಮ ಕೈಲಾದಷ್ಟು ನೆರವಿನ ಹಸ್ತ ಚಾಚಿದ್ದಾರೆ. ಕೆಲವೊಂದು ವಕೀಲರಿಂದ ನಡೆಸಲ್ಪಡುವ ಸ್ವಯಂ ಸೇವಾ ಸಂಸ್ಥೆಗಳು ಕಿರಿಯ ವಕೀಲರನ್ನು ಗುರುತಿಸಿ ಸಹಾಯಹಸ್ತ ಚಾಚಿವೆ. ಅಲ್ಲಲ್ಲಿ ನಡೆದ ಇಂತಹ ಸಹಾಯ ಪ್ರವೃತ್ತಿಗಳು ವೃತ್ತಿಯ ಹಿರಿಮೆಯನ್ನು ಹೆಚ್ಚಿಸಿವೆ. ಅವರೆಲ್ಲರಿಗೂ ನಾವು ಅಭಾರಿಯಾಗಿದ್ದೇವೆ.

ಈಗಿನ ಸಂದರ್ಭಕ್ಕನುಸಾರವಾಗಿ ವಕೀಲ ಪರಿಷತ್ತು ಹಿಂದೆಂದಿಗಿಂತಲೂ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ವಕೀಲರ ಹಿತಾಸಕ್ತಿಗೆ ಮತ್ತು ಅವರ ಶ್ರೇಯೋಭಿವೃದ್ಧಿಗೆ ಒತ್ತಡದ ನಡುವೆ ಕೆಲಸ ಮಡುವ ಈ ಸಂಧರ್ಭದಲ್ಲಿ ಪರಿಷತ್ತು ದಿಟ್ಟ ಹೆಚ್ಚೆಯನ್ನು ಇಡಬೇಕಿದೆ. ನಾವುಗಳೆಲ್ಲರೂ ಸ್ವ-ಹಿತಾಸಕ್ತಿಯನ್ನು ಬದಿಗೊತ್ತಿ ಆರ್ಥಿಕ ಸಂಕಷ್ಟದಿಂದ ವಕೀಲರನ್ನು ಪಾರು ಮಾಡಲು ಒಗ್ಗೂಡಲು ಇದು ಸುಸಂಧರ್ಭ. ರಾಜ್ಯ ವಕೀಲ ಸಮುದಾಯದ ಏಕೈಕ ಸಂಸ್ಥೆಯಾದ ವಕೀಲ ಪರಿಷತ್ತು ರಾಜ್ಯದ ಎಲ್ಲಾ ವಕೀಲ ಸಂಘಗಳ ಹಾಗೂ ಹಿರಿಯ ವಕೀಲರ ನೆರವನ್ನು ಪಡೆದು ವಕೀಲ ವೃತ್ತಿಯನ್ನು ಎತ್ತಿ ಹಿಡಿಯಬೇಕಿದೆ. ಹತಾಶರಾಗಿರುವ ವಕೀಲರ ಸಂಕಷ್ಟಗಳನ್ನು ದೂರ ಸರಿಸಿ ವಕೀಲರು ಆತ್ಮಸ್ಥೈರ್ಯದಿಂದ ಮತ್ತು ಸ್ವಾಭಿಮಾನದಿಂದ ವಕೀಲ ವೃತ್ತಿ ನಡೆಸುವ ವಾತಾವರಣವನ್ನು ಮರುನಿರ್ಮಾಣ ಮಾಡಬೇಕಿದೆ.

ಸಹಿ

ವಕೀಲರುಗಳು

(ಕರ್ನಾಟಕ ವಕೀಲರ ಕ್ಷೇಮಾಭಿವೃದ್ಧಿ ವೇದಿಕೆ)


Translated Copy

To,

Hon’ble President,

Karnataka State Bar Council,

Bengaluru-560001

Subject: In reference to severe quandary faced by the Advocate community in the state of Karnataka due to theadverse effects from the outbreak of Covid-19, a Plea to bring in an amendment to “THE KARNATAKA ADVOCATES' WELFARE FUND ACT, 1983’, in order to secure the living of Advocates who are facing acute economic hardship.

Respected Sir,

That object and purpose of implementing the ‘THE KARNATAKA ADVOCATES' WELFARE FUND ACT, 1983’ is to ensure quality disbursement of legal service and to provide social security to the Advocates community. In according to the changing situations and circumstances, amendments were made to facilitate those advocates who retire within 15 years of professional experience withRs.4,00,000/-, to those between 15 years and 35 yearswith Rs.6,00,000/- and to those who put in above 35 years of professional service will be paid a sum of Rs.8,00,000/- that in case of death of Advocates in the said slots this benefit will be transferred to the eligible legal heirs of the advocates.

Additionally, accordance with Sec.16(B), in reference to part payment from the fund during financial hardship. A member who has attained the age of sixty five years and has completed twenty years of practice as an advocate and twelve years as a member of the fund is facing a financial hardship may, in the situation leading to such financial hardship shall be such as may be prescribed. If the trustee committee is satisfied with the claim of the applicant it may, with the prior approval of the Bar Council, sanction an amount equivalent to fifty per cent of entitlement of the applicant under section 16 (B) or one lakh fifty thousand rupees whichever is less.

Entire world stands shattered form never ever seen or experienced radical spread of deadly pandemic Covid-19, that in order to restrict the spread of pandemic most nations have announced lock down as the only way. India as a part of lockdown decision has from last 40 days is under lockdown. As a consequence in the state of Karnataka the Advocates are rendered workless without earning, are isolated at home from 14 of March 2020 to coming 17th of May 2020 totalling to 65 days. This situation is likely to continue for next two months; already the advocates have undergone enough financial hardship and mental suffering without work and earnings due to closed offices and courts. It is anticipated that at the least next 2 to 3 months would be necessary to expect restoration of normalcy. In this situation it is imperative to mention that advocates are overburdened to take care of family members especially children and elderly and secure their health in this covid-19 crisis.

It is a matter of fact that large number of advocates from across the state are in distress unable to manage the expenses arising out of purchase of essential commodities, medicines, payment of rents of office and house and connected expenses of electricity and water etc., EMI of the loans and other expenses connected to education of children etc.,

That immediately after our respected Prime Minister of India announced lockdown of 21 days, the duty bound B.C.I has urged the union and state governments together to announce monthly financial assistance of Rs.20,000/- to the advocates that too to the young advocates who are facing economic issues, either directly or through BCI’s Advocates welfare fund. Your good selves have also separately approached from Bar Council of Karnataka to the Chief Minister of the state and to the Prime Minister which act showcases your concern towards the Advocate Community which is in serious trouble in these times of crisis.

It is notable that Hon’ble Chief Minister of Karnataka Sri. B.S. Yediyurappa has announced Rs.1610 Crores (One thousand six hundred and ten crores) of help to Agriculturists, Barbers, Dhobis, Auto/Taxi drivers and construction workers and others from the state government. The Chief Minister has expressed intention of calling for assembly session in his Press Conference in short possible time, however the Advocate community facing severe hardship and economic issues stands deprived from such government assistance and hence is facing uncertainty.

We express our heartfelt appreciations to BCI for providing Rs.45,00,000/-(Forty five lakhs) to its Karnataka chapter for distribution of aid to troubled advocate community in Karnataka, more recently Hon’ble High Court of Karnataka, division bench consisting Chief Justice has decided two Writ Petitions bearing Number W.P.No.6695 & 6696 /2020 accordingly the outcome of said decisions helping Advocates with available fund of Rs.2 Crores from KSBC and Rs.45 lakhs from BCI totally Rs.2 Crores and 45 lakhs will be distributed among the advocates below 10 years of practice and the other advocates will be treated as per the donations from senior advocates and other members of the Bar are also with in our notice.

We are also aware of several meetings that are held from the date of lockdown, between the Advocates Association and Bar Council of Karnataka and efforts to assist the Advocate community. It is admitted that no one has anticipated such a serious and emergency situation that is being faced by the world due to the outbreak of Covid-19 would happen, so in the case of Bar council of Karnataka, which has performed without worries until the outbreak of Covid-19 but now has become helpless to extend necessary economic assistance. We are now witnessing that the Bar Council is working under pressure, therefore it is submitted that this letter of high importance not be treated as a pressure, but as a plea emerging out of huge pain and practical suffering of the advocates from this pandemic. It is therefore requested that the Bar Council should work on alternative methods and ways to find a solution for this crisis involving large number of advocates. In this direction we present before you the following ways and demands to find a solution through the power and authority of Bar Council of Karnataka and its parent body BCI.

  • To repeatedly urge Hon’ble Prime Minister and Chief Minister to announce Rs.50 Crores(Rupees Fifty Crores) as special package.
  • To work as a pressure group for making necessary amendments in The Karnataka Advocates' Welfare Fund Act, 1983 through state legislation in the coming assembly session for providing economic assistance for the present crisis.
  • Bar Council has been providing Advocates who retire with 15 years of professional experience with Rs.4,00,000/-, to those between 15 years and 35 years with Rs.6,00,000/- and to those who put in above 35 years of professional service with Rs.8,00,000/- that in case of death of Advocates in the said slots this benefit will be given to the dependents of the advocates. Now in the face of national lockdown the Advocates are unable to perform their duty of attending courts, offices and clients continuously, therefore the Bar Council should treat this as EXTRAORDINARY EMERGENCY and discuss with Advocate Association to announce to the needy applicant advocates to the maximum 25% release from their welfare fund based on the applicability of years of service of valid profession.
  • To relax the section 16(B) of The Karnataka Advocates' Welfare Fund Act, 1983 so as to issue an advance of Rs.50,000/- to the needy advocates from the welfare fund account and adjust the same during final settlement of welfare funds.
  • To insert section 16(C) to The Karnataka Advocates' Welfare Fund Act, 1983 so as to consider and issue immediate economic assistance to health emergency and to cope up with natural calamities.
  • To re-establish ‘Advocates Family Welfare fund’ under The Karnataka Advocates' Welfare Fund Act, 1983 to tackle health emergencies of advocates and their families by helping in managing severe situations during possible reoccurrences of situations like that of Covid-19.
  • To establish separate fund to provide compensation to advocates troubled in situations of any natural calamities or epidemic or pandemics.
  • That as provided in section-18 of welfare fund act to bring into action “Nyaya Kavacha” group insurance scheme.
  • That as provided in section-27 of welfare fund act to establish welfare fund for the ‘Registered Clerks of Advocates’ in order to assist them in needy times.
  • That as provided in section-76(A) from the angle of social security of Advocates to bring into force (Legal Benefit Fund) to help advocates.
  • That in order to secure, collect and stabilise funds for the welfare of advocates to make procedures by law to collect 1% of the value of cost of suit in the form of cess in various courts and at tribunals cases involving companies, corporate entities, business transactions such as in documentations of mergers and acquisitions etc., however, the cases involving government and its agencies, private and personal cases of people can be totally excluded from payment of cess.
  • That, steps be taken to deposit the fines that are imposed by courts on clients during hearing of cases at local respective taluk and district level Advocate Associations or to the Bar Councils for advocates welfare purposes.

That this deadly Covid-19 has indeed created serious alarming situation more so has destabilized the Advocate community by pushing them into first of its kind socio-economic issues, therefore this is time to put up united efforts to ensure the welfare and quickly respond to the emergency of advocates. In this situation it is highly commendable that the Advocates Association Bengaluru has issued an emergency aid of Rs.5000/- to as many as 368 junior Advocates, other Advocate Associations too have jumped in advocates welfare activities by providing essential commodities in their limited capacities, some law firms and senior lawyers have helped their juniors and assisting lawyers by making of payment/salary of two months during the lockdown time. Several advocates through their humanitarian background have helped junior advocates by providing financial assistance to their capacities in several of the districts spread across Karnataka; several voluntary service organisations run by advocates are also contributing to the welfare of needy Advocates. This humanitarian trend of understanding the seriousness of the Covid-19 and timely response to aid and assist the advocates in dire need of economic assistance from one and all is highly appreciable and has certainly enhanced the dignity of advocacy.

The Bar Council needs appreciations in its endeavours to tackle the impacts of covid-19, it is now functioning with utmost responsibility and creativity in responding to the crisis situation. That there is also a need to take bold steps and initiatives to overcome present emergencies, its therefore time for all of us to take into confidence the Advocate Associations, Advocates and unite advocate community by denouncing differences to unite for the cause for the sake of ensuring to provide suitable economic aid and support to all those advocates in need. Bar council of Karnataka being the one and only council of Advocate community needs to take up this matter of Advocates Welfare on war footing by taking support of Advocate associations in order to uphold the life, living and dignity of Advocates and their noble profession Advocacy. It’s time to respond to the pain and sufferings of Advocates, address their economic emergencies and more importantly induce in them the strength and self-confidence by standing with them in this vulnerable situation and economic turmoil. After all, advocates welfare in present context needs much more attention, as they are the torch bearers of law, forefront warriors of social justice and predominant contributors of development of this nation.

Sd/-

Advocates

(KARNATAKA ADVOCATES’ WELFARE FORUM)

Share for Success

Comment

682

Signatures